Job Description: ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಸ್ಥೆಯಾದ ISRO ವು ತನ್ನ ಚೊಚ್ಚಲ ಗಗನಯಾನ್ ಮಿಷನ್ ನಲ್ಲಿ ಪಾಲ್ಗೊಳ್ಳಲು ಒಟ್ಟು ನಾಲ್ಕು ಗಗನಯಾತ್ರಿಗಳ ಮೊದಲ ತಂಡವನ್ನು ರಷ್ಯಾಕ್ಕೆ ಕಳುಹಿಸಿತ್ತು, ಇದೀಗ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿರುವುದಾಗಿ ರಷ್ಯಾದ ಬಾಹ್ಯಾಕಾಶ ಕೇಂದ್ರ ರಾಸ್ಕಾಸ್ಮೋಸ್ನ ಅಧೀನ ಸಂಸ್ಥೆ ಗ್ಲಾವ್ಕೋಸ್ಮೋಸ್ ತಿಳಿಸಿದೆ. ಗಗನಯಾನ ಮಿಷನ್ 2020: ಗಗನಯನ್ ಪೂರ್ಣ ಸ್ವತಂತ್ರ ಗಗನನೌಕೆಯಾಗಿದ್ದು, ಅಂದಾಜು 3.7-ಟನ್ (8,200 ಪೌಂಡು) ತೂಕ ಹೊಂದಿದೆ. ಒಟ್ಟು 3 ಗಗನಯಾತ್ರಿಗಳನ್ನು ಕಕ್ಷೆಗೆ ಕೊಂಡೊಯ್ಯಲು ಮತ್ತು ಏಳು ದಿನಗಳ ಕಾರ್ಯಾಚರಣೆಯ ನಂತರ ಅವರನ್ನು ಸುರಕ್ಷಿತವಾಗಿ ಭೂಮಿಗೆ ತಲುಪುವಂತೆ ಮಾಡಲು ವಿನ್ಯಾಸಗೊಳಿಸಲಾಗಿದೆ.