Job Description: ಜಮ್ಮು ಮತ್ತು ಕಾಶ್ಮೀರ ನೂತನ ರಾಜ್ಯಪಾಲರಾಗಿ (ಲೆಫ್ಟಿನೆಂಟ್ ಗವರ್ನರ್) ಮನೋಜ್ ಸಿನ್ಹಾ ಅವರನ್ನು ನೇಮಕ ಮಾಡಲಾಯಿತು. ಇತ್ತೀಚಿಗೆ ಈ ಹುದ್ದೆಯಲ್ಲಿದ್ದ ರಾಜ್ಯಪಾಲ ಜಿ.ಸಿ.ಮುರ್ಮು ಅವರು ತಮ್ಮ ರಾಜಿನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಿದ್ದರು, ಹಾಗೂ ರಾಷ್ಟ್ರಪತಿಗಳು ಇವರ ರಾಜಿನಾಮೆಯನ್ನು ಅಂಗೀಕರಿಸಿದ ಹಿನ್ನಲೆ ಜಮ್ಮು ಮತ್ತು ಕಾಶ್ಮೀರ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಮನೋಜ್ ಸಿನ್ಹಾ ಅವರನ್ನು ನೇಮಕ ಮಾಡಲಾಯಿತು. *ಮನೋಜ್ ಸಿನ್ಹಾ ಅವರು ಉತ್ತರಪ್ರದೇಶದ ಘಾಜಿಪುರ ಲೋಕಸಭೆ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅಲ್ಲದೆ ಕಳೆದ ಅವಧಿಯ ಮೋದಿ ಸಂಪುಟದಲ್ಲಿ ಸಚಿವರಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ.