Job Description: ನ್ಯೂಯಾರ್ಕ್: ಆಗಸ್ಟ್ 05 ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದು, ಈ ಐತಿಹಾಸಿಕ ಕಾರ್ಯಕ್ರಮದಂದು ಅಮೆರಿಕಾದಲ್ಲಿಯೂ ರಾಮ ಸ್ಮರಣೆ ಮಾಡಲಾಯಿತು. ಅಯೋಧ್ಯೆಯ ರಾಮ ಮಂದಿರದ ನೂತನ ದೇವಾಲಯದ ವಿನ್ಯಾಸವನ್ನು ನ್ಯೂಯಾರ್ಕ್ ನ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ ನ ಬಿಲ್ ಬೋರ್ಡ್ ನಲ್ಲಿ ಬಿತ್ತರಿಸಲಾಯಿತು. ವಿಶ್ವದ ಅತಿ ದೊಡ್ಡ ಐಕಾನಿಕ್ ಸ್ಕ್ರೀನ್ ಎಂದೇ ಪ್ರಸಿದ್ದಿ ಪಡೆದಿರುವ ಈ ಪರದೆಯಲ್ಲಿ ಭಾರತ ಧ್ವಜ ಮತ್ತು ಶ್ರೀರಾಮ ದೇವಾಲಯ ಪ್ರದರ್ಶನಗೊಳ್ಳುತ್ತಿರುವುದು ಭಾರತ ಜಾಗತಿಕ ಮಟ್ಟದಲ್ಲಿ ಮಹತ್ವದ ಸ್ಥಾನದಲ್ಲಿದೆ ಎಂಬುದನ್ನು ತಿಳಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.