Job Description: ನವದೆಹಲಿ: ಭಾರತವು ಮಾರಿಷಸ್ ರಾಷ್ಟ್ರಕ್ಕೆ ಸುಪ್ರೀಂ ಕೋರ್ಟ್ ನಿರ್ಮಿಸಲು ಆರ್ಥಿಕ ನೆರವನ್ನು ನೀಡಿತ್ತು, ಸದರಿ ಮಾರಿಷಸ್ ನ ಸುಪ್ರೀಂ ಕೋರ್ಟ್ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆ ರಾಷ್ಟ್ರದ ಪ್ರಧಾನಿ ಪ್ರವಿಂದ ಕುಮಾರ ಜಗನ್ನಾಥ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಜಂಟಿಯಾಗಿ ನೂತನ ಕಟ್ಟವನ್ನು ಉದ್ಘಾಟಿಸಿದರು. * ಭಾರತವು ತನ್ನ ವಿದೇಶ ನೀತಿಯ ಭಾಗವಾಗಿ ಹಿಂದು ಮಹಾಸಾಗರ ವಲಯದ ದೇಶಗಳ ಸಹಕಾರ, ಸಹಭಾಗಿತ್ವದ ಅಂಗವಾಗಿ ಭಾರತ ಮಾರಿಷಸ್ಗೆ ನೆರವು ನೀಡಿದೆ. * 'ಸತ್ಯಮೇವ ಜಯತೆ' ಸಿದ್ಧಾಂತದಲ್ಲಿ ತಮ್ಮ ದೇಶಕ್ಕೆ ನಂಬಿಕೆಯಿದೆ ಎಂದ ಮಾರಿಷಸ್ ಪ್ರಧಾನಿ ತಮ್ಮ ಭಾಷಣದಲ್ಲಿ ತಿಳಿಸಿದರು. * ಸುಪ್ರೀಂಕೋರ್ಟ್ ನೂತನ ಕಟ್ಟಡ ರಾಜಧಾನಿ ಪೋರ್ಟ್ ಲೂಯಿಸ್ನಲ್ಲಿದೆ. * 2016ರಲ್ಲಿ ಭಾರತ 2,643 ಕೋಟಿ ರೂಪಾಯಿ ಮೊತ್ತದ ಐದು ಯೋಜನೆಗಳ ವಿಶೇಷ ಆರ್ಥಿಕ ಪ್ಯಾಕೇಜ್ನ ಭಾಗವಾಗಿ ಕಟ್ಟಡ ನಿರ್ಮಾಣಕ್ಕೆ ನೆರವು ನೀಡಿತ್ತು.