Job Description: ನವದೆಹಲಿ: ದೇಶದಲ್ಲಿನ TV ತಯಾರಕರನ್ನು ಪ್ರೋತ್ಸಾಹಿಸುವ ಮತ್ತು TV ಯಂತಹ ತೀರಾ ಅಗತ್ಯವಲ್ಲದ ವಸ್ತುಗಳನ್ನು ನೆರೆಯ ಚೀನಾದಂತಹ ರಾಷ್ಟ್ರಗಳಿಂದ ಆಮದು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು TV ಆಮದು ಮಾಡಿಕೊಳ್ಳುವದನ್ನು ನಿಷೇಧಿಸಿ ಕ್ರಮ ಕೈಗೊಂಡಿದೆ. * ಕಲರ್ ಟಿ.ವಿ.ಗೆ ಸಂಬಂಧಿಸಿದ ಆಮದು ನೀತಿಯಲ್ಲಿ ತಿದ್ದುಪಡಿ ತರಲಾಗಿದ್ದು, ಅದನ್ನು ಮುಕ್ತ ವರ್ಗದಿಂದ, ನಿರ್ಬಂಧಿತ ವರ್ಗಕ್ಕೆ ತರಲಾಗಿದೆ' ಎಂದು ವಿದೇಶ ವಹಿವಾಟುಗಳ ಮಹಾನಿರ್ದೇಶನಾಲಯ ಹೇಳಿದೆ. * 'ನಿರ್ಬಂಧಿತ' ವರ್ಗದ ಪಟ್ಟಿಯಲ್ಲಿರುವ ವಸ್ತುಗಳನ್ನು ಆಮದಿಗೆ ಪರವಾನಗಿ ಅಗತ್ಯವಾಗಿರುತ್ತದೆ. ಭಾರತಕ್ಕೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಟಿ.ವಿ.ಗಳನ್ನು ರಫ್ತುಮಾಡುವಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ವಿಯೆಟ್ನಾಂ, ಮಲೇಷ್ಯಾ, ಹಾಂಗ್ಕಾಂಗ್, ಕೊರಿಯಾ, ಇಂಡೊನೇಷ್ಯಾ, ಥಾಯ್ಲೆಂಡ್ ಮತ್ತು ಜರ್ಮನಿ ಗಳು ಸ್ಥಾನ ಪಡೆದಿವೆ.