Job Description: ಜಾಗತಿಕವಾಗಿ ಬಹುತೇಕ ಎಲ್ಲ ರಾಷ್ಟ್ರಗಳು COVID-19 ಸೋಂಕಿನಿಂದ ತತ್ತರಿಸಿರುವ ಹಿನ್ನಲೆ ಕೋರೋಣ ವಿರುದ್ಧದ ಹೋರಾಡಲು ಭಾರತಕ್ಕೆ ಏಷ್ಯಾ ಪೆಸಿಫಿಕ್ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ 3 ಮಿಲಿಯನ್ USD (22 ಕೋಟಿ ರೂ. ಗೆ ಸಮಾನ) ಅನುದಾನವನ್ನು ನೀಡಲು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನಿರ್ಧರಿಸಿದೆ. * ಈ ಅನುದಾನಕ್ಕೆ ಹಣಕಾಸನ್ನು ಜಪಾನಿನ ಸರ್ಕಾರವು ಒದಗಿಸಲಿದೆ. * ಥರ್ಮಲ್ ಸ್ಕ್ಯಾನರ್ಗಳು, ರೋಗದ ಪತ್ತೆ, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯನ್ನು ನೀಡಲು ಇದನ್ನು ಬಳಸಲಾಗುವದು. ಏಷ್ಯನ್ ಅಭಿವೃದ್ಧಿ ಬ್ಯಾಂಕ್ : ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ (ABD) 1966 ರಲ್ಲಿ ಸ್ಥಾಪಿಸಲಾದ ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಆಗಿದೆ. ಇದರ ಪ್ರಧಾನ ಕಚೇರಿಯು ಫಿಲಿಪೈನ್ಸ್ನ ಮನಿಲಾದಲ್ಲಿದೆ. ಭಾರತವು ಈ ಬ್ಯಾಂಕ್ ಸ್ಥಾಪನೆಯಾದಾಗಿನಿಂದಲೂ ಸದಸ್ಯ ರಾಷ್ಟ್ರವಾಗಿದೆ.