Job Description: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಹಾಗೂ ಏಮ್ಸ್(AIIMS) ಜಂಟಿಯಾಗಿ, ಆಸ್ಪತ್ರೆಗಳಲ್ಲಿ ಕೋರೋಣ ಸೋಂಕಿತರ ಚಿಕಿತ್ಸೆಯನ್ನು ಸುಧಾರಿಸುವ ಸದುದ್ದೇಶದಿಂದ ದೇಶಾದ್ಯಂತ ದಾಖಲಾದ COVID-19 ರೋಗಿಗಳ ಹೊಸ ಡೇಟಾಬೇಸ್ ಅನ್ನು ಸಂಗ್ರಹಿಸುತ್ತಿವೆ. ಈ ದತ್ತಾಂಶ ಸಂಗ್ರಹಕ್ಕೆ "COVID-19 ರೋಗಿಗಳಿಗೆ ರಾಷ್ಟ್ರೀಯ ಕ್ಲಿನಿಕಲ್ ನೋಂದಣಿ" ಎಂದು ಹೆಸರಿಸಲಾಗಿದೆ. ಈ ದತ್ತಾಂಶವು ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಮತ್ತು ಮಾರಕ ವೈರಸ್ ವಿರುದ್ಧ ಅದರ ಪ್ರತಿಕ್ರಿಯೆಯನ್ನು ಅಧ್ಯಯನ ಮಾಡಲು ಒಂದು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ನೋಂದಾವಣೆಯನ್ನು ರಚಿಸುವ ಮುಖ್ಯ ಉದ್ದೇಶ: * ರೋಗದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು * ವಿಭಿನ್ನ ಜನರ ಮೇಲೆ ವಿಭಿನ್ನ ರೀತಿಯಲ್ಲಿ ಹೇಗೆ ಪರಿಣಾಮ ಬೀರುತ್ತಿದೆ ಎಂಬುದರ ಅಧ್ಯಯನ * ಪ್ರತಿಯೊಬ್ಬರಿಗೂ ಒಂದೇ ರೀತಿಯ ಚಿಕಿತ್ಸೆ ಏಕೆ ಪರಿಣಾಮ ಬಿರುತ್ತಿಲ್ಲ ಎಂಬುದನ್ನು ಆರೋಗ್ಯ ಅಧಿಕಾರಿಗಳಿಗೆ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.