Job Description: ಜೆರುಸಲೆಂ: ಕೊರೊನಾ ವೈರಸ್ ಅನ್ನು ನಿಯಂತ್ರಿಸಲು ನಾವು ಭಾರತಕ್ಕೆ ಹೊಸ ತಂತ್ರಜ್ಞಾನದ ಸುಧಾರಿತ ವೈದ್ಯಕೀಯ ಉಪಕರಣಗಳನ್ನು ಪೂರೈಸಿದ್ದೇವೆ ಹಾಗೂ ಈ ಮೂಲಕ ಭಾರತದೊಂದಿಗಿನ ನಮ್ಮ ಸಂಬಂಧವನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿರುವದಾಗಿ ಇಸ್ರೇಲ್ ತಿಳಿಸಿದೆ. ಇಸ್ರೇಲ್ ರಾಷ್ಟ್ರದಿಂದ ಸಂಶೋಧಕರು, ರಕ್ಷಣಾ ತಜ್ಞರು ಮತ್ತು ಆಧುನಿಕ ವೈದ್ಯಕೀಯ ಸಲಕರಣೆಗಳನ್ನು ಹೊತ್ತು ವಿಶೇಷ ವಿಮಾನವು ಜುಲೈ 27 ರಂದು ಭಾರತಕ್ಕೆ ಬಂದಿಳಿದಿದೆ. ಈ ಮೂಲಕ ಭಾರತ ಮತ್ತು ಇಸ್ರೇಲ್ನ ಸಂಶೋಧಕರ ತಂಡಗಳು ಜೊತೆಗೂಡಿ ಕೋವಿಡ್ ಸೋಂಕಿನ ಪರೀಕ್ಷೆಗಾಗಿ ರ್ಯಾಪಿಡ್ ಪರೀಕ್ಷಾ ಕಿಟ್ ಅಭಿವೃದ್ಧಿಪಡಿಸಲಿದ್ದಾರೆ. * ಏಪ್ರಿಲ್ 7 ರಂದು ಭಾರತವು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಮತ್ತು ವೈದ್ಯಕೀಯ ಸಲಕರಣೆಗಳು ಸೇರಿದಂತೆ ಒಟ್ಟು 5 ಟನ್ ಔಷಧಿಗಳನ್ನು ಇಸ್ರೇಲ್ ರಾಷ್ಟ್ರಕ್ಕೆ ರಫ್ತು ಮಾಡಿತ್ತು.