Job Description: ಬೆಂಗಳೂರು: 150ಕ್ಕೂ ಹೆಚ್ಚು ಜೈವಿಕ ತಂತ್ರಜ್ಞಾನ ಸ್ಥಾಪನೆಗೆ ಅವಕಾಶ ಮಾಡಿಕೊಡಲಿರುವ "ಲೈಫ್ ಸೈನ್ಸ್ ಕಂಪನಿ ಪಾರ್ಕ್" ಸ್ಥಾಪನೆಗಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಬೆಂಗಳೂರು ನಗರದ ಸಮೀಪವಿರುವ ಎಲೆಕ್ಟ್ರಾನಿಕ್ ಸಿಟಿಯಾ ಲ್ಯಾಬ್ ಝೋನ್ ಎಲೆಕ್ಟ್ರಾನಿಕ್ ಸಿಟಿ ಪ್ರೈ.ಲಿ ಈ ಪಾರ್ಕನ್ನು ಅಭಿವೃದ್ಧಿಪಡಿಸಲಿದೆ. * ಬೆಂಗಳೂರು ಲೈಫ್ ಸೈನ್ಸ್ ಪಾರ್ಕ್ ಸ್ಥಾಪನೆಯಿಂದ 150ಕ್ಕೂ ಹೆಚ್ಚು ಕಂಪನಿಗಳು ಇಲ್ಲಿ ನೆಲೆಗೊಳ್ಳಲಿವೆ. ಸುಮಾರು 50 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಯಾಗುವ ನಿರೀಕ್ಷೆಯಿರುವದಾಗಿ ಮುಖ್ಯಮಂತ್ರಿ ತಿಳಿಸಿದರು.