Job Description: ನವದೆಹಲಿ: ಜುಲೈ 29 ರ ವಿಶ್ವ ಹುಲಿ ದಿನಾಚರಣೆ ಪ್ರಯುಕ್ತ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು 4ನೇ 'ಅಖಿಲ ಭಾರತ ಹುಲಿ ಅಂದಾಜು-2018' ಹೆಸರಿನ 600 ಪುಟಗಳ ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದು, ಈ ವರದಿ ಅನುಸಾರ ಮಧ್ಯ ಪ್ರದೇಶ ರಾಜ್ಯದಲ್ಲಿ 526 ಹುಲಿಗಳನ್ನು ಹೊಂದಿದೆ, ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ಹುಲಿ ಹೊಂದಿರುವ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು 2 ಮತ್ತು 3ನೇ ಸ್ಥಾನದಲ್ಲಿ ಕರ್ನಾಟಕ ಅಭಯಾರಣ್ಯಗಳು ಸ್ಥಾನಪಡಿದಿವೆ. * ರಾಜ್ಯದಲ್ಲಿ 524 ಹುಲಿಗಳನ್ನ ಹೊಂದಿರುವ ನಾಗರಹೊಳೆ ಅಭಯಾರಣ್ಯಕ್ಕೆ 2ನೇ ಸ್ಥಾನ ಪಡೆದಿದೆ. * ಬಂಡೀಪುರ ಅಭಯಾರಣ್ಯ 126 ಹುಲಿಗಳನ್ನ ಹೊಂದುವ ಮೂಲಕ 3ನೇ ಸ್ಥಾನದಲ್ಲಿದೆ. * ಅಸ್ಸಾಂನ ಕಾಜಿರಂಗಾ ಹಾಗೂ ಮಧ್ಯಪ್ರದೇಶದ ಬಾಂಧವಗಢ ಅರಣ್ಯದಲ್ಲಿ ತಲಾ 104 ಹುಲಿಗಳಿವೆ.