Job Description: * ವಿಶ್ವದ ಒಟ್ಟು ಹುಲಿಗಳ ಪೈಕಿ 70% ಹುಲಿಗಳು ಭಾರತದಲ್ಲಿ ಕಂಡುಬರುತ್ತವೆ ಎಂದು ಇತ್ತೀಚಿಗೆ ಕೇಂದ್ರ ಸಚಿವ ಜಾವಡೇಕರ್ ಮಾಹಿತಿ ನೀಡಿದ್ದಾರೆ. * 30,000 ಆನೆಗಳು, 3000 ಏಕಕೊಂಬಿನ ಖಡ್ಗಮೃಗಗಳು ಮತ್ತು 500 ಕ್ಕೂ ಹೆಚ್ಚು ಸಿಂಹಗಳಿವೆ. * 1973ರಲ್ಲಿ ಕೇವಲ 9 ಇದ್ದ ಹುಲಿ ಸಂರಕ್ಷಿತ ಪ್ರದೇಶಗಳ ಸಂಖ್ಯೆ ಈಗ 50ಕ್ಕೆ ಏರಿಕೆಯಾಗಿದೆ. * ಜಗತ್ತಿನಲ್ಲಿ 13 ದೇಶಗಳಲ್ಲಿ ಹುಲಿ ವ್ಯಾಪ್ತಿ ಇದೆ. ಭಾರತ, ಬಾಂಗ್ಲಾದೇಶ, ಭೂತಾನ್, ಕಾಂಬೊಡಿಯಾ, ಚೀನಾ, ಇಂಡೊನೇಷ್ಯಾ, ಲಾವೊ, ಮಲೇಷ್ಯಾ, ಮ್ಯಾನ್ಮಾರ್, ನೇಪಾಳ, ರಷ್ಯಾ, ಥಾಯ್ಲೆಂಡ್, ವಿಯಟ್ನಾಂ ದೇಶಗಳಲ್ಲಿ ಹುಲಿ ಸಂತತಿ ಇದೆ. * ಅಂತರರಾಷ್ಟ್ರೀಯ 'ಹುಲಿ ದಿನ’ (ಜುಲೈ29) * ವಿಶ್ವ ಜೀವವೈವಿಧ್ಯತೆಯಲ್ಲಿ ಜಾಗತಿಕವಾಗಿ ಶೇ 8ರಷ್ಟು ಪಾಲು ಭಾರತ ಹೊಂದಿರುವದು ವಿಶೇಷ. * 2019ರ ದತ್ತಾಂಶಗಳ ಪ್ರಕಾರ, ದೇಶದಲ್ಲಿ 2,967 ಹುಲಿಗಳಿವೆ. 2006ರಲ್ಲಿ 1,411 ಹುಲಿಗಳಿದ್ದವು.