Job Description: ಇದೆ ಜುಲೈ 27, 2020 ರಂದು, ಮೊದಲ ಬ್ಯಾಚ್ ರಫೆಲ್ ಜೆಟ್ಸ್ ಯುದ್ಧ ವಿಮಾನಗಳ ಮೊದಲ ಬ್ಯಾಚ್ ಭಾರತಕ್ಕೆ ಫ್ರಾನ್ಸ್ನಿಂದ ಹಾರಿವೆ. 2020 ರ ಜುಲೈ 29 ರಂದು ಈ ವಿಮಾನಗಳು ಭಾರತವನ್ನು ತಲುಪಲಿವೆ. * 2016 ರಲ್ಲಿ ಭಾರತ ಸರ್ಕಾರವು 36 ರಫೆಲ್ ಜೆಟ್ಗಳ ಖರೀದಿಸಲು ಫ್ರಾನ್ಸ್ ರಾಷ್ಟ್ರದ ಫ್ರೆಂಚ್ ಡಸಾಲ್ಟ್ ಏವಿಯೇಷನ್ನೊಂದಿಗೆ 59,000 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿತು. ಈ ಒಪ್ಪಂದ ಭಾಗವಾಗಿ ಮೊದಲ ಬ್ಯಾಚ್ ನ ಐದು ರಫೆಲ್ ಜೆಟ್ ಗಳು ಭಾರತಕ್ಕೆ ಆಗಮಿಸಲಿವೆ, ಉಳಿದ 31 ಜೆಟ್ಗಳನ್ನು 2021 ರೊಳಗೆ ತಲುಪಿಸಲಾಗುವುದು. * ಜೆಟ್ಗಳು ಗಂಟೆಗೆ ಗರಿಷ್ಠ 2,222.6 ಕಿ.ಮೀ ವೇಗದಲ್ಲಿ ಸಾಗಬಲ್ಲವು. ಹಾಗೂ ಇದು 50,000 ಅಡಿಗಳವರೆಗೆ ಮೇಲೆ ಹಾರಾಟ ನಡೆಸಬಹುದು. * ಈ ರಫೆಲ್ ಗಳಿಗೆ ಗಾಳಿಯ ಮಧ್ಯೆಯೇ ಇಂಧನ ತುಂಬಿಸಬಹುದು * ರಫೆಲ್ 9,500 ಕೆಜಿ ತೂಕವನ್ನು ಸಾಗಿಸಬಲ್ಲದು. * ಈರಫೆಲ್ ಗೆ ಜೋಡಿಸಲಾದ ಫಿರಂಗಿಗಳು ಒಂದು ನಿಮಿಷದಲ್ಲಿ 2,500 ಸುತ್ತುಗಳ ಗುಂಡು ಹರಿಸಬಲ್ಲವು.