Job Description: ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ(CCI)ವು ಹತ್ತಿಯ ಹೆಚ್ಚುವರಿ ದಾಸ್ತಾನುಗಳನ್ನು ಹೊಂದಿದ್ದು, ಮುಂದಿನ ಸುಗ್ಗಿಯ ಕಾಲ ಸಮೀಪಿಸುತ್ತಿರುವುದರಿಂದ ರಫ್ತು ಹೆಚ್ಚಿಸಲು ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ(CCI) ಪ್ರಯತ್ನಿಸುತ್ತಿದೆ. ಈ ಹಿನ್ನಲೆ ಹತ್ತಿಯಾ ರಫ್ತು ಹೆಚ್ಚಿಸಲು CCI ಯು ವಿಯೆಟ್ನಾಂನಲ್ಲಿ ತನ್ನದೇ ಆದ ಗೋದಾಮು ಸ್ಥಾಪಿಸಲು ಮುಂದಾಗಿದೆ. ಅಲ್ಲದೆ ಭಾರತವು 1.5 ರಿಂದ 2 ಮಿಲಿಯನ್ ಬೇಲ್ ಹತ್ತಿಯನ್ನು ರಫ್ತು ಮಾಡಲು ಬಾಂಗ್ಲಾದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಇದು ಭಾರತ ಸರ್ಕಾರದ ಏಜೆನ್ಸಿ ಸಂಸ್ಥೆಯಾಗಿದ್ದು, ಹತ್ತಿಯ ರಫ್ತು, ವ್ಯಾಪಾರ ಮತ್ತು ಖರೀದಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು ಜವಳಿ ಸಚಿವಾಲಯದಿಂದ 1985 ರಿಂದ ನಿಯಂತ್ರಿಸಲಾಗುತ್ತಿದೆ.