Job Description: ಪಟ್ನಾ: ಕೋರೋಣ ಸೋಂಕಿನಿಂದ ಸರ್ಕಾರಿ ನೌಕರರು ನಿಧನರಾದ ಪಕ್ಷದಲ್ಲಿ ಅವರನ್ನು ಅವಲಂಬಿಸಿರುವವರಿಗೆ ' ವಿಶೇಷ ಕುಟುಂಬ ಪಿಂಚಣಿ' ನೀಡವ ನೂತನ ಅಭಿಯಾನಕ್ಕೆ ಬಿಹಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸರ್ಕಾರೀ ನೌಕರರು ಕರ್ತವ್ಯದಲ್ಲಿರುವಾಗ ಕೋವಿಡ್ನಿಂದಾಗಿ ಸರ್ಕಾರಿ ನೌಕರರು ಮೃತಪಟ್ಟರೆ, ಅವರನ್ನು ಅವಲಂಬಿಸಿರುವವರಿಗೆ ಅನುಕಂಪದ ಆಧಾರದಲ್ಲಿ ಇತರ ಪ್ರಯೋಜನಗಳೊಂದಿಗೆ ಸರ್ಕಾರಿ ಉದ್ಯೋಗ ಕಲ್ಪಿಸಲಾಗುವುದು ಇಲ್ಲದ ಪಕ್ಷದಲ್ಲಿಆ ಸರ್ಕಾರಿ ನೌಕರರ ನಿವೃತ್ತಿ ದಿನದವರೆಗಿನ ವೇತನವನ್ನು 'ವಿಶೇಷ ಕುಟುಂಬ ಪಿಂಚಣಿ' ಹೆಸರಿನಲ್ಲಿ ಕುಟುಂಬಸ್ಥರಿಗೆ ನೀಡಲು ಬಿಹಾರ ಸರ್ಕಾರ ತೀರ್ಮಾನಿಸಿದೆ.