Job Description: ನವದೆಹಲಿ : ಕಾರ್ಗಿಲ್ ವಿಜಯ ದಿವಸಕ್ಕೆ ಇಂದು 21ನೇ ವರ್ಷಾಚರಣೆ ಸಂಭ್ರಮ. ಪಾಕಿಸ್ತಾನ ಸೇನೆ 1999ರಲ್ಲಿ ಕಾರ್ಗಿಲ್-ಡ್ರಾಸ್ ವಲಯದಲ್ಲಿ ಅಕ್ರಮವಾಗಿ ಪ್ರವೇಶಿಸಿ ಭಾರತದ ಪ್ರಾಂತ್ಯಗಳನ್ನು ವಶಪಡಿಸಿಕೊಂಡ ಕಾರಣ ಕೇಂದ್ರ ಸರ್ಕಾರ ಆಪರೇಷನ್ ವಿಜಯವನ್ನು ಘೋಷಿಸಿತು. ನಂತರದಲ್ಲಿ ಭಾರತೀಯ ಸೇನೆಯು ಎರಡೂವರೆ ತಿಂಗಳ ಕಾಲ ಕಾರ್ಗಿಲ್ ನಲ್ಲಿ ಯುದ್ಧ ಸೆಣೆಸಿ, ಕೊನೆಗೆ ಭಾರತೀಯ ಸೇನೆ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟುವಲ್ಲಿ ಜುಲೈ 29, 1999ರಂದು ಯಶಸ್ವಿಯಾಯಿತು. ಈ ಮೂಲಕ ಕಾರ್ಗಿಲ್ ಪ್ರದೇಶವನ್ನು ಭಾರತೀಯ ಸೇನೆಯು ತನ್ನ ವಶಕ್ಕೆ ಪಡೆಯಿತು. ಈ ದಿನದ ವಿಜಯ ಮತ್ತು ಭಾರತೀಯ ಸೈನಿಕರ ತ್ಯಾಗ, ಬಲಿದಾನಗಳನ್ನು ನೆನೆಯಲು ಪ್ರತಿವರ್ಷ ಜುಲೈ 26ನ್ನು "ಕಾರ್ಗಿಲ್ ವಿಜಯ್ ದಿವಸ" ಎಂದು ಆಚರಿಸಲಾಗುತ್ತದೆ. * ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯಾಗಿದ್ದರು, ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಆಗಿದ್ದರು.