Job Description: ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸಿರುವ ಹಿನ್ನಲೆ ಕರ್ನಾಟಕ ಅಂಚೆ ಇಲಾಖೆಯು, ಮಹಿಳೆಯರಿಗಾಗಿ ಆನ್ ಲೈನ್ ರಾಕಿ ಪೋಸ್ಟ್ ಸೇವೆ ಆರಂಭಿಸಿದೆ. ಇದೆ ಆಗಸ್ಟ್ 3ರಂದು ರಕ್ಷಾ ಬಂಧನ ಆಚರಿಸಲು ಅಂಚೆ ಇಲಾಖೆ ಆನ್ ಲೈನ್ ಮೂಲಕ ರಾಖಿ ಖರೀದಿ ಮತ್ತು ರವಾನೆ ಸೇವೆಯನ್ನು ಆರಂಭಿಸಿದೆ. ಕೊರೋನಾ ವೈರಸ್ ಸೋಂಕಿನ ಭೀತಿಯಿಂದ ಜನರು ಸುರಕ್ಷಿತವಾಗಿ ರಾಖಿ ಖರೀದಿಸಲು ಮತ್ತು ಅದನ್ನು ಅವರಿಗೆ ತಲುಪಿಸಲು ತೊಂದರೆಯಾಗುವದ ಮನಗಂಡು ಅಂಚೆಇಲಾಖೆಯು ಆನ್ ಲೈನ್ ಮೂಲಕ ರಾಖಿ ಪೋಸ್ಟ್ ಮಾಡುವ ಸೇವೆಯನ್ನು ಆರಂಭಿಸಿದೆ.