Job Description: ಜಮ್ಮು: ಕಾಶ್ಮೀರ ಕಣಿವೆಯಲ್ಲಿ ಬೆಳೆದ ಕೇಸರಿಗೆ ಭೌಗೋಳಿಕ ಮಾನ್ಯತೆಯ ಪ್ರಮಾಣೀಕರಣವನ್ನು ಕೇಂದ್ರ ಸರ್ಕಾರ ನೀಡಿದೆ. ಲೆಫ್ಟಿನೆಂಟ್ ಗೌರ್ನರ್ ಗಿರೀಶ್ ಚಂದ್ರ ಮುರ್ಮು ಅವರು ಕಾಶ್ಮೀರದ ಕೇಸರಿಗೆ ಜಿಐ ಸರ್ಟಿಫಿಕೇಷನ್ ಸಿಗುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. * ಪ್ಯಾಂಪೋರ್ ಕಾಶ್ಮೀರದಲ್ಲಿನ ಕೇಸರಿ ಉತ್ಪಾದನೆಯ ಹಬ್ ಆಗಿದೆ. * 3,715 ಹೆಕ್ಟೇರ್ ನಷ್ಟು ಪ್ರದೇಶವನ್ನು ಪುನರುಜ್ಜೀವನಗೊಳಿಸಿ ಕೇಸರಿ ಬೆಳೆ ಬೆಳೆಯುವುದಕ್ಕೆ 411 ಕೋಟಿ ರೂಪಾಯಿಗಳ ಅನುದಾನವನ್ನು ಕೇಂದ್ರ ಸರ್ಕಾರ ನೀಡಿತ್ತು. * ಜಿಐ ಸರ್ಟಿಫಿಕೇಷನ್ ನಿಂದ ಕಾಶ್ಮೀರ ಕೇಸರಿಯ ಕಲಬೆರಕೆಯಾಗುವುದನ್ನು ನಿಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೇ ಕಾಶ್ಮೀರದ ಕೇಸರಿಗೆ ರಫ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗಲಿದೆ.