Job Description: ಬೆಂಗಳೂರು: ಹಲವು ವರ್ಷಗಳ ನಂತರ ಇದೀಗ ಕೇಂದ್ರ ಸರ್ಕಾರವು ರಾಜ್ಯದ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (Eco-Sensitive Zone) ಎಂದು ಘೋಷಿಸಿದೆ. ಒಟ್ಟು 316.67 ಚದರ ಕಿ.ಮೀ ವಿಸ್ತೀರ್ಣದ, ಸಂರಕ್ಷಿತ ಪ್ರದೇಶವಾದ ಕುದುರೆಮುಖವು ಇನ್ನುಮುಂದೆ ESZ(Eco-Sensitive Zone) ವ್ಯಾಪ್ತಿಗೆ ಒಳಪಡಲಿದೆ. ಇದರಿಂದಾಗಿ ESZ ಗೆ ಸೇರ್ಪಡೆಗೊಂಡ ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 58 ಗ್ರಾಮಗಳು ಮತ್ತು 108 ರೆವಿನ್ಯೂ ಆವರಣಗಳಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗುವದು. * ಸಮುದ್ರ ಮಟ್ಟದಿಂದ 135 ಮೀಟರ್ ಎತ್ತರ * ಭಾರತ ಮತ್ತು ವಿಶ್ವದ ಸಿಂಹಗಳ ಮೂತಿಯ ಹೋಲುವ ಮಕಾಕ್ಸ್ ಗಳ ಏಕೈಕ ತಾಣ * ವಿಶ್ವದ ಅತಿ ಉದ್ದದ ವಿಷಪೂರಿತ ಹಾವು, ಕಾಳಿಂಗ ಸರ್ಪ (ಕಿಂಗ್ ಕೋಬ್ರಾ)ತ್ತು ಮಲಬಾರ್ ಸ್ಲೆಂಡರ್ ಲೋರಿಸ್ಟ್ ಗಳ ನೆಲೆಯೂ ಆಗಿದೆ.