Job Description: ನವದೆಹಲಿ : ಪ್ರತಿಷ್ಠಿತ ಮೊಬೈಲ್ ಮತ್ತು ಇತರ ಎಲೆಕ್ರ್ಟಿಕ್ ಉಪಕರಣಗಳ ಸಂಸ್ಥೆಯಾದ ಆಪಲ್ ಸಂಸ್ಥೆಯು ಭಾರತದ ಚೆನ್ನೈನ ಫಾಕ್ಸ್ಕಾನ್ ಸ್ಥಾವರದಲ್ಲಿ ತನ್ನ ಪ್ರಮುಖ ಸಾಧನಗಳಲ್ಲಿ ಒಂದಾದ ಐಫೋನ್ 11 ತಯಾರಿಕಾ ಘಟಕವನ್ನು ಆರಂಭಿಸಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರ ತಮ್ಮ ಟ್ವಿಟರ್ ಖಾತೆ ಮೂಲಕ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತದ ಉಪಕ್ರಮದ ಪ್ರಮುಖ ಗೆಲುವಿನಲ್ಲಿ ಆಪಲ್ ಸಂಸ್ಥೆ ತನ್ನ ತಯಾರಿಕಾ ಪ್ರಾರಂಭಿಸಿದೆ. ಭಾರತದಲ್ಲಿ ಆಪಲ್ ಟಾಪ್-ಆಫ್-ಲೈನ್ ಮಾದರಿಯನ್ನು ತಯಾರಿಸುತ್ತಿರುವುದು ಇದೇ ಮೊದಲು.