Job Description: ಮಾಸ್ಕೋ : ಅಮೆರಿಕ, ಭಾರತ, ಜಪಾನ್ ಸೇರಿ ಕೆಲ ದೇಶಗಳೊಂದಿಗಿನ ಚೀನಾ ಸಂಬಂಧ ಅಷ್ಟು ಚನ್ನಾಗಿ ಇಲ್ಲದ ಬೆನ್ನಲ್ಲೇ ಚೀನಾದ ವಿರುದ್ಧ ಎಲ್ಲರೂ ಒಗ್ಗೂಡಬೇಕಿದೆ ಎಂದು ಅಮೆರಿಕ ಕರೆ ನೀಡಿತ್ತು. ಆದರೆ ಚೀನಾ ವಿರುದ್ಧದ ಯಾವುದೇ ಒಕ್ಕೂಟವನ್ನು ತಾನು ಸೇರುವದಿಲ್ಲ ಎಂದು ರಷ್ಯಾ ಸರ್ಕಾರ ಸ್ಪಷ್ಟಪಡಿಸಿದೆ. ರಷ್ಯಾ ಚೀನಾದೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಅಲ್ಲದೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಚೀನಾ ವಿರೋಧಿ ಒಕ್ಕೂಟವನ್ನು ಸೇರಿ ಚೀನಾ ವಿರುದ್ಧ ಯಾವುದೇ ರೀತಿಯ ಹೋರಾಟ ನಡೆಸುವುದಿಲ್ಲ ಎಂದು ರಷ್ಯಾ ಸರ್ಕಾರದ ಸ್ಪಷ್ಟಪಡಿಸಿದೆ. ಈ ಮೂಲಕ ಚೀನಾ ವಿರುದ್ಧ ಎಲ್ಲಾ ಆರ್ಥಿಕ ಹಾಗೂ ಬೇರೆ ಸ್ವರೂಪದ ಹೋರಾಟಕ್ಕೆ ರಷ್ಯಾ ಬೆಂಬಲ ನಿರೀಕ್ಷಿಸಿದ್ದ ಅಮೆರಿಕ, ಭಾರತ ಹಾಗೂ ಜಪಾನ್ಗೆ ಹಿನ್ನಡೆಯಾದಂತಾಗಿದೆ.