Job Description: ಬೆಂಗಳೂರು : ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲಾ ಅರಣ್ಯ ವ್ಯಾಪ್ತಿಯಲ್ಲಿ ನೆಲೆಸಿರುವ ಸಿದ್ದಿ ಜನಾಂಗದ ವ್ಯಕ್ತಿಯಾದ ಶಾಂತರಾಮ ಬುದ್ನ ಸಿದ್ದಿಯವರು ಸದನದ ಮೇಲ್ಮನೆಯಾದ ವಿಧಾನ ಪರಿಷತ್ತನ್ನು ಪ್ರವೇಶಿಸುತ್ತಿದ್ದಾರೆ. ಶಾಂತರಾಮ ಬುದ್ನ ಸಿದ್ದಿಯವರ ಹೆಸರನ್ನು ಬಿಜೆಪಿಯಿಂದ ನಾಮ ನಿರ್ದೇಶನಗೊಳಿಸಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ.ಈ ಮೂಲಕ ಸಿದ್ದಿ ಜನಾಂಗದ ಪ್ರತಿನಿಧಿಯೊಬ್ಬರು ವಿಧಾನ ಪರಿಷತ್ತಿಗೆ ಆಯ್ಕೆಯಾದಂತಾಗಿದೆ. * ಪೂರ್ವ ಆಫ್ರಿಕಾದಿಂದ ಬಂದು ಭಾರತದಲ್ಲಿ ನೆಲೆಸಿರುವ ಸಿದ್ದಿ ಜನಾಂಗದವರು ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಗುಂಪಿಗೆ ಸೇರುತ್ತಾರೆ.