Job Description: ನವದೆಹಲಿ : ಮುಕೇಶ್ ಅಂಬಾನಿ ಜಗತ್ತಿನ 5ನೇ ಅತಿ ಸಿರಿವಂತ ವ್ಯಕ್ತಿಯೆಂದು 'ಫೋರ್ಬ್ಸ್' ಪತ್ರಿಕೆ ಇತ್ತೀಚಿಗೆ ವರದಿ ಮಾಡಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥರಾದ ಮುಕೇಶ್ ಅಂಬಾನಿಯವರ ಜಿಯೋ ಸಂಸ್ಥೆಯಲ್ಲಿ ಹಲವಾರು ಸಂಸ್ಥೆಗಳು ಹೂಡಿಕೆ ಮಾಡಿದ ಹಿನ್ನಲೆ ಮುಕೇಶ್ ಅಂಬಾನಿಯವರ ಸಂಪತ್ತು ಹೆಚ್ಚಳಗೊಂಡಿದ್ದು, ಪ್ರಸ್ತುತ ಅಮೆರಿಕದ ಹೂಡಿಕೆದಾರ, ಉದ್ಯಮಿ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ್ದಾರೆಂದು ಫೋರ್ಬ್ಸ್ ತಿಳಿಸಿದೆ. * ಮುಕೇಶ್ ಅಂಬಾನಿಯ ಸಂಪತ್ತಿನ ಮೌಲ್ಯ 75 ಶತಕೋಟಿ ಡಾಲರ್ (5.61 ಲಕ್ಷ ಕೋಟಿ ರೂ.) ಆಗಿರುವುದಾಗಿ ಫೋರ್ಬ್ಸ್ ವರದಿ ಮಾಡಿದೆ.