Job Description: ತೈವಾನ್ : ಚೀನಾ ರಾಷ್ಟ್ರವು ದಿನಾಂಕ 23 ಜುಲೈ 2020 ರಂದು ಮಾನವರಹಿತ ಉಪಗ್ರಹವನ್ನು ಮಂಗಳ ಗ್ರಹಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ತನ್ನ ಮೊದಲ ಸ್ವತಂತ್ರ ಕಾರ್ಯಾಚರಣೆಯಲ್ಲಿ ಯಶಸ್ವಿಯಾಯಿತು. ದಕ್ಷಿಣ ದ್ವೀಪದ ಹೈನಾನ್ನ ವೆನ್ಚಾಂಗ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಚೀನಾದ ಅತಿದೊಡ್ಡ ವಾಹಕ ರಾಕೆಟ್ ಲಾಂಗ್ ಮಾರ್ಚ್ 5 ವೈ -4 ಮೂಲಕ ಮಧ್ಯಾಹ್ನ 12:41 ಕ್ಕೆ ನಭಕ್ಕೆ ಉಡಾವಣೆ ಮಾಡಲಾಯಿತು. * ಇದು ಮಂಗಳ ಗ್ರಹದಲ್ಲಿ 90 ದಿನಗಳವರೆಗೆ ಗ್ರಹವನ್ನು ಅನ್ವೇಷಿಸಲು ರೋವರ್ ಅನ್ನು ನಿಯೋಜಿಸಲು ಪ್ರಯತ್ನಿಸುತ್ತದೆ. * ಈ ಕಾರ್ಯಾಚರಣೆ ಸಫಲವಾದರೆ, ಮಂಗಳ ಗ್ರಹಕ್ಕೆ ರೋವರ್ ಅನ್ನು ಕಕ್ಷೆಗೆ ಇಳಿಸುವ, ಮತ್ತು ನಿಯೋಜಿಸುವ ಮೊದಲ ದೇಶವಾಗಿ ಚೀನಾ ಹೊರ ಹೊಮ್ಮುಲಿದೆ.