Job Description: ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಕಳೆದ 75 ವರ್ಷಗಳ ಇತಿಹಾಸದಲ್ಲಿಯೇ ಇದೇ ಪ್ರಪ್ರಥಮ ಬಾರಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಾಮಾನ್ಯ ಸಭೆಯನ್ನು ನಡೆಸಲು ಉದ್ದೇಶಿಸಲಾಗಿದ್ದು, ಈ ಸಭೆಯಲ್ಲಿ 193 ಸದಸ್ಯ ರಾಷ್ಟ್ರಗಳು ಭಾಗವಹಿಸಲಿವೆ. * ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಅಧಿವೇಶನವು ಇದೆ ಸೆಪ್ಟೆಂಬರ್ 15 ರಂದು ಆರಂಭವಾಗಲಿದ್ದು, ಜಾಗತಿಕವಾಗಿ ವ್ಯಾಪಿಸಿರುವ ಕೋರೋಣ ಸೋಂಕಿನ ಭೀತಿಯಿಂದ ಈ ಬಾರಿಯ ಅಧಿವೇಶನವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಈ ಮೂಲಕ ಪ್ರಮುಖ ದೇಶಗಳ ನಾಯಕರುಗಳು ತಮ್ಮ ಭಾಷಣದ ವಿಡಿಯೊ ಸಂದೇಶಗಳನ್ನು ಸಾಮಾನ್ಯ ಸಭೆಗೆ ಕಳುಹಿಸಲಿದ್ದಾರೆ.