Job Description: ನವದೆಹಲಿ: ಕಳೆದ ತಿಂಗಳಷ್ಟೇ ಚೀನಾದ 59 ಆಯಪ್ಗಳನ್ನು ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಭದ್ರತೆ ವಿಚಾರವಾಗಿ ದಕ್ಕೆತರುವ ಕಾರಣದಿಂದ ನಿಷೇಧಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತಷ್ಟು ಚೀನಾ ರಾಷ್ಟ್ರದ ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ. 'ಹೆಲೋ ಲೈಟ್', 'ಶೇರ್ಇಟ್ ಲೈಟ್', 'ಬಿಗೊ ಲೈಟ್' ಮತ್ತು 'ವಿಎಫ್ವೈ ಲೈಟ್'ನಂತಹ ಹಲವು ಅಪ್ಲಿಕೇಶನ್ಗಳನ್ನು ನಿಷೇದಿಸಲಾಗಿದೆ. ನಿಷೇಧಕ್ಕೆ ಗುರಿಯಾದ ಆಯಪ್ಗಳು ಬೇರೆಯ ಆವೃತ್ತಿಯ ಮೂಲಕ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿರುವ ಕಾರಣ ಇವುಗಳನ್ನು ನಿಷೇದಿಸಿರುವದಾಗಿ ಐಟಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.