Job Description: ಬಾಲಸೋರ್ (ಒಡಿಶಾ) : ಚಂಡೀಪುರದ ಸಮಗ್ರ ಪರೀಕ್ಷಾ ವಲಯದಿಂದ ಎರಡು ಬಾರಿ ಟ್ಯಾಂಕರ್ ಧ್ವಂಶಕ ಅತ್ಯಾಧುನಿಕ ಮಹಾ ಆಯುಧ ಧ್ರುವಾಸ್ತ್ರ ಕ್ಷಿಪಣಿಗಳನ್ನು ಎರಡು ಬಾರಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಹಿರಿಯ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ವೈರಿಗಳ ಟ್ಯಾಂಕರ್ಗಳು, ಬಂಕರ್ಗಳು ಮತ್ತು ಸಶಸ್ತ್ರ ವಾಹನಗಳನ್ನು ಧ್ವಂಸಗೊಳಿಬಲ್ಲ ಅತ್ಯಾಧುನಿಕ ಧ್ರುವಾಸ್ತ್ರ ಕ್ಷಿಪಣಿಗಳನ್ನು ಓಡಿಶಾದ ಬಾಲಸೋರ್ನಲ್ಲಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. * ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (DRDO) ಯು ಈ ಆಯುಧವನ್ನು ಅಭಿವೃದ್ದಿ ಪಡಿಸಿದೆ. * ಹೆಲಿಕಾಪ್ಟರ್ ಮೂಲಕ ಶತ್ರುಗಳ ಬಂಕರ್ಗಳು (ರಹಸ್ಯ ಅಡಗುದಾಣಗಳು), ಟ್ಯಾಂಕರ್ಗಳು, ಮತ್ತು ಸಶಸ್ತ್ರ ವಾಹನಗಳನ್ನು ನಿಖರವಾಗಿ ಧ್ವಂಸಗೊಳಿಸಬಲ್ಲ ಅಗಾಧ ಸಾಮಥ್ರ್ಯವನ್ನು ಧುವಾಸ್ತ್ರ ಮಿಸೈಲ್ ಒಳಗೊಂಡಿದೆ.