Job Description: ನವದೆಹಲಿ : ಭಾರತೀಯ ನೌಕಾಪಡೆಯ ಕಣ್ಗಾವಲು ವಿಮಾನ ಪೋಸಿಡಾನ್-8 ಐ ಬರುವ ವರ್ಷದಲ್ಲಿ ಅಮೆರಿಕಾದಿಂದ ಭಾರತಕ್ಕೆ ಬರಲಿದೆ. ಈ ವಿಮಾನಗಳನ್ನು ಅಮೆರಿಕಾದ ಬೋಯಿಂಗ್ ಸಂಸ್ಥೆಯು ತಯಾರಿಸಿದ್ದು, ಹಿಂದೂ ಮಹಾಸಾಗರದ ಮೇಲೆ ಕಣ್ಣಿಡಲು ಭಾರತದ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. ಹಿಂದೂ ಮಹಾಸಾಗರದಲ್ಲಿ ಚೀನಾವು ಅಧಿಪತ್ಯ ಸಾಧಿಸಲು ತೀವ್ರ ಪೈಪೋಟಿ ನಡೆಸಿರುವ ಹಿನ್ನಲೆ ಭಾರತ ಈ ವಿಮಾನಗಳ ಖರೀದಿಗೆ ಮುಂದಾಗಿದೆ. ನಾಲ್ಕು ಕಣ್ಗಾವಲು ವಿಮಾನಗಳುಳ್ಳ ಮೊದಲ ಬ್ಯಾಚ್ ಮುಂದಿನ ವರ್ಷ ಅಮೆರಿಕಾದಿಂದ ಭಾರತಕ್ಕೆ ಬರಲಿದೆ. ಪೋಸಿಡಾನ್-8 I (ಪಿ-8 ಐ) ವಿಮಾನ * ಇದು ಒಂದು ಸಮಯದಲ್ಲಿ 129 ಸೋನಾರ್ ವ್ಯವಸ್ಥೆಗಳನ್ನು ಸಾಗಿಸಬಲ್ಲದು * ಇದು ಸಮುದ್ರದ ಆಳವಾದ ನೀರಿನಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ. * ಹಡಗು ವಿರೋಧಿ ಕ್ಷಿಪಣಿಯಿಂದ ಶತ್ರುಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಕೂಡ ಹೊಂದಿದೆ