Job Description: ನವದೆಹಲಿ: ಇತ್ತೀಚಿಗೆ ಪೂರ್ವ ಲಡಾಖ್ನ ಪ್ರದೇಶದಲ್ಲಿ ಚೀನಾ ತಕರಾರು ತೆಗೆದ ಹಿನ್ನಲೆ ವಾಸ್ತವಿಕ ನಿಯಂತ್ರಣ ರೇಖೆ ಬಳಿ ಇರುವ ಅತ್ಯಂತ ಎತ್ತರದ ಹಾಗೂ ಪರ್ವತ ಪ್ರದೇಶಗಳಲ್ಲಿ ಚೀನಾ ಸೇನೆಯ ಚಲನವಲನದ ಮೇಲೆ ಗಮನವಹಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು ಭಾರತೀಯ ಸೇನೆಗೆ 'ಭಾರತ್' ಹೆಸರಿನ ಡ್ರೋನ್ಗಳನ್ನು ಅಭಿವೃದ್ಧಿ ಪಡಿಸಿ ಹಸ್ತಾಂತರಿಸಿದೆ. ಇದರಿಂದಾಗಿ ಭಾರತೀಯ ಸೇನೆಗೆ ಗಡಿಯಲ್ಲಿ ನಿಖರವಾದ ಕಣ್ಗಾವಲು ನಡೆಸಲು 'ಭಾರತ್' ಡ್ರೋನ್ಗಳು ಸಹಕಾರಿಯಾಗಲಿವೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.