Job Description: ಭಾರತ ಸರ್ಕಾರದ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್ ಕೆ ಸಿಂಗ್ ಅವರು ನವದೆಹಲಿಯ ಚೆಲ್ಮ್ಸ್ಫೋರ್ಡ್ ಕ್ಲಬ್ನಲ್ಲಿ ದೇಶದ ಮೊದಲ ಸಾರ್ವಜನಿಕ ವಿದ್ಯುತ್ ವಾಹನ ಚಾರ್ಜಿಂಗ್ ಪ್ಲಾಜಾವನ್ನು ಉದ್ಘಾಟಿಸಿದರು. * ಈ ಚಾರ್ಜಿಂಗ್ ಪ್ಲಾಜಾ ಜೊತೆಗೆ ಸಚಿವರು RAISE (Retrofit of Air-conditioning to improve Indoor Air Quality for Safety and Efficiency) ಅನ್ನು ಉದ್ಘಾಟಿಸಿದರು. ಇದು EESL(ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್) ಮತ್ತು USIID (ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್) ಜಂಟಿ ಉಪಕ್ರಮವಾಗಿದೆ.