Job Description: ಪ್ರತಿ ವರ್ಷ ಜುಲೈ 20 ರಂದು, ಚಂದ್ರನ ಮೇಲೆ ಮನುಷ್ಯ ಮೊದಲು ಕಾಲಿಟ್ಟ ದಿನದ ಐತಿಹಾಸಿಕ ಗಳಿಗೆಯ ವಾರ್ಷಿಕೋತ್ಸವದ ಸವಿನೆನಪಿಗೆ ಬಾಹ್ಯಾಕಾಶ ಪರಿಶೋಧನಾ ದಿನವನ್ನು ಆಚರಿಸಲಾಗುತ್ತದೆ. * ಜುಲೈ 20, 1969 ರಂದು, ಅಮೆರಿಕಾದ ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಎಡ್ವಿನ್ ಬಜ್ ಚಂದ್ರನ ಮೇಲ್ಮೈಗೆ ಇಳಿದ ಮೊದಲ ಮಾನವರಾದರು. ಆರ್ಮ್ಸ್ಟ್ರಾಂಗ್- ಎಡ್ವಿನ್ ಜೋಡಿ ಚಂದ್ರನ ಮೇಲ್ಮೈಯಲ್ಲಿ 21.5 ಗಂಟೆಗಳ ಕಾಲ ಕಳೆದರು. ಅಲ್ಲದೆ, ಅವರು ತಮ್ಮ ಕ್ಯಾಪ್ಸುಲ್ಗಳ ಹೊರಗೆ 2.5 ಗಂಟೆಗಳ ಕಾಲ ಕಳೆದರು. ಈ ದಿನವನ್ನು ಮುಖ್ಯವಾಗಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಆಚರಿಸಲಾಗುತ್ತದೆ.