Job Description: ದಿನಾಂಕ ಜುಲೈ 19, 2020 ರಂದು ವಾಣಿಜ್ಯ ಸಚಿವಾಲಯವು ರಫ್ತುಗಳ ದಾಂತ್ತಾಂಶವನ್ನು ಬಿಡುಗಡೆ ಮಾಡಿದ್ದು, ಈ ಮಾಹಿತಿಯ ಪ್ರಕಾರ, ಮಸಾಲೆ ಪದಾರ್ಥಗಳ ರಫ್ತು ಶೇಕಡಾ 23 ರಷ್ಟು ಹೆಚ್ಚಾಗಿದೆ. * ಜೂನ್ 2019 ರ ಭಾರತೀಯ ಮಸಾಲೆ ರಫ್ತು ಪ್ರಮಾಣವನ್ನು 2020 ರ ಜೂನ್ ತಿಂಗಳಿಗೆ ಹೋಲಿಸಿದರೆ 23% ಹೆಚ್ಚಾಳ ಕಂಡುಬಂದಿದೆ. * ಜಾಗತಿಕವಾಗಿ ವ್ಯಾಪಿಸಿರುವ COVID-19 ಸೋಂಕು ತಡೆಯಲು ಪ್ರಪಂಚದಾದ್ಯಂತ ಜನರು ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ನೈಸರ್ಗಿಕ ವಿಧಾನ ಅನುಸರಿಸುತ್ತಿದ್ದು, ಇದು ಭಾರತದ ಮಸಾಲೆಗಳ ರಫ್ತು ಹೆಚ್ಚಾಗಲು ಇದು ಮುಖ್ಯ ಕಾರಣವಾಗಿದೆ.