Job Description: ನವದೆಹಲಿ: ದಿನಾಂಕ 20-07-2020 ರಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ 'ಗ್ರಾಹಕ ಸಂರಕ್ಷಣಾ ಕಾಯ್ದೆ -2019' ಅನ್ನು ಅಧಿಕೃತವಾಗಿ ಜಾರಿಗೊಳಿಸಿದೆ. ಈ ಮೊದಲು ಜಾರಿಯಲ್ಲಿದ್ದ ಗ್ರಾಹಕ ಸಂರಕ್ಷಣಾ ಕಾಯ್ದೆ,1986 ಅನ್ನು ಬದಲಿಸಿ ಗ್ರಾಹಕ ಸಂರಕ್ಷಣಾ ಕಾಯ್ದೆ, 2019ಗೆ ರಾಷ್ಟ್ರಪತಿ ಕೋವಿಂದ್ 2019 ಆಗಸ್ಟ್ 9ರಂದು ಅಂಕಿತ ಹಾಕಿದ್ದರು. ಈ ಕಾಯ್ದೆಯು ಇಂದಿನಿಂದ(20-07-2020) ದೇಶವ್ಯಾಪಿ ಜಾರಿಗೊಳ್ಳುತ್ತಿದೆ. ಈ ನೂತನ ಕಾಯ್ದೆಯು ಇ-ಕಾಮರ್ಸ್ ಅನ್ನು ಸಹ ತನ್ನ ವ್ಯಾಪ್ತಿಯಲ್ಲಿ ಸೇರಿಸಿಕೊಂಡಿದೆ. ಹೊಸ ಮಾರ್ಗಸೂಚಿಗಳ ಮೂಲಕ ಗ್ರಾಹಕರ ಹಕ್ಕುಗಳನ್ನು ರಕ್ಷಿಸುತ್ತವೆ.