Job Description: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 44 ಲಕ್ಷ ರೂ ಮೊತ್ತದ ಯೋಜನೆಗಳನ್ನು ಜಾರಿಗೊಳಿಸಲಿದೆ. * ಸ್ವಸಹಾಯ ಗುಂಪುಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಾಂತ್ಯದಲ್ಲಿನ ಸ್ವ-ಸಹಾಯ ಗುಂಪುಗಳ ಕೌಶಲ್ಯ ಅಭಿವೃದ್ಧಿಗೆ ಸಹಾಯ ಮಾಡಲು NABARD ಈ ಯೋಜನೆಗಳನ್ನು ಆರಂಭಿಸಿದೆ. * ಸುಮಾರು 385 ಗ್ರಾಮ ಮಟ್ಟದ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಹೊಸದಾಗಿ ರೂಪುಗೊಂಡ ಸ್ವಸಹಾಯ ಸಂಘಗಳ ಮುಖಂಡರಿಗೆ ತರಬೇತಿ ನೀಡಲು 10 ಲಕ್ಷ ರೂ ಮೀಸಲಿರಿಸಲಾಗಿದೆ. * ಯೋಜನೆಯಡಿ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಅಣಬೆ ಕೃಷಿ ಮತ್ತು ಬಿದಿರಿನ ಕರಕುಶಲ ಕಲೆಗಳಿಗೆ ತರಬೇತಿ ನೀಡಲಾಗುವುದು.