Job Description: ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಅಂಚೆ ಮತಪತ್ರ ಆಯ್ಕೆಯ ವಯೋಮಿತಿ ಸಡಿಲಿಕೆ ಮಾಡದಿರಲು ಚುನಾವಣಾ ಆಯೋಗ ಗುರುವಾರ ನಿರ್ಧರಿಸಿದೆ. ದೇಶದಲ್ಲಿ ವ್ಯಾಪಿಸಿರುವ ಕೋವಿಡ್ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಸುರಕ್ಷತೆ ದೃಷ್ಟಿಯಿಂದ 65 ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನವರಿಗೆ ಅಂಚೆ ಮತಪತ್ರ ಆಯ್ಕೆಗೆ ಅವಕಾಶ ಕಲ್ಪಿಸಿ ಕಾನೂನು ಸಚಿವಾಲಯ ಚುನಾವಣಾ ನಿಯಮಗಳಿಗೆ ಇತ್ತೀಚಿಗೆ ತಿದ್ದುಪಡಿ ತಂದಿತ್ತು. ಆದರೆ, ಚುನಾವಣಾ ಆಯೋಗ ಪ್ರಕಟಿಸಿರುವ ಪ್ರಕಟಣೆ ಪ್ರಕಾರ, 80 ಅಥವಾ 80 ಕ್ಕಿಂತ ಹೆಚ್ಚು ವಯಸ್ಸಿನ ಹಿರಿಯರು, ಅಂಗವಿಕಲರು, ಅಗತ್ಯ ಸೇವೆಗಳಲ್ಲಿ ನಿರತರಾಗಿರುವವರು ಮತ್ತು ಕೋವಿಡ್-19 ಸೋಂಕಿತರು ಅಥವಾ ಕ್ವಾರಂಟೈನ್ನಲ್ಲಿರುವ ಮತದಾರರಿಗೆ ಮಾತ್ರ ಅಂಚೆ ಮತಪತ್ರದ ಮೂಲಕ ಮತದಾನ ನಡೆಸುವ ಅವಕಾಶವನ್ನು ವಿಸ್ತರಿಸಿರುವದಾಗಿ ಚುನಾವಣಾ ಆಯೋಗ ತಿಳಿಸಿದೆ.