Job Description: ವಾಷಿಂಗ್ಟನ್ : ಅಮೇರಿಕಾದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ಈ ಮಧ್ಯೆ ಆನ್ ಲೈನ್ ಶಿಕ್ಷಣ ಕೈಗೊಂಡ ವಿದೇಶಿ ವಿದ್ಯಾರ್ಥಿಗಳ ವೀಸಾ ರದ್ದು ಮಾಡುವುದಾಗಿ ಟ್ರಂಪ್ ಘೋಷಿಸಿದ್ದರು, ಆದರೆ ಈ ಹೇಳಿಕೆಗೆ ತೀವ್ರ ವಿರೋಧ ಕೇಳಿ ಬಂದ ಹಿನ್ನಲೆ, ಅಮೆರಿಕಾ ಇದೀಗ ಟ್ರಂಪ್ ಸರ್ಕಾರ ಹೇಳಿಕೆ ಹಿಂಪಡೆದಿದೆ. * ಹಾರ್ವರ್ಡ್ ಹಾಗೂ ಎಂಐಟಿ ಸಂಸ್ಥೆಯಲ್ಲಿ ಅನೇಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎರಡು ಸಂಸ್ಥೆಗಳು ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಆದೇಶ ಹಿಂಪಡೆಯಲಾಗಿದೆ.