Job Description: ನವದೆಹಲಿ : ದೇಶದಲ್ಲಿ ಕಳೆದ 18 ವರ್ಷದಲ್ಲಿ ಇದೇ ಮೊದಲ ಬಾರಿಗೆ ಜೂನ್ನಲ್ಲಿ ಆಮದು ಮೌಲ್ಯಕ್ಕಿಂತ ರಫ್ತು ಮೌಲ್ಯವು ಹೆಚ್ಚಳ ಕಂಡಿದೆ. ರಫ್ತು ವಹಿವಾಟಿನ ಮೌಲ್ಯ 1,64,325 ಕೋಟಿ ರುಪಾಯಿ ಆದರೆ, ಆಮದು ವಹಿವಾಟಿನ ವೆಚ್ಚವು 1,58.325 ಕೋಟಿ ರುಪಾಯಿ ಆಗಿದೆ. ಈ ಮೂಲಕ ರಫ್ತು ಮೌಲ್ಯ ಸುಮಾರು ಆರು ಸಾವಿರ ಕೋಟಿ ಹೆಚ್ಚಿದ್ದು, ಈ ಹಿಂದೆ 2002ರಲ್ಲಿ ರಫ್ತು ಮೌಲ್ಯವು ಆಮದು ವೆಚ್ಚಕ್ಕಿಂತಲೂ 75 ಕೋಟಿ ಹೆಚ್ಚಿಗೆ ಆಗಿತ್ತು.