Job Description: ಚೀನಾದ ವುಹಾನ್ನಿಂದ ಆರಂಭವಾದ ಕೋವಿಡ್-19 ಸೋಂಕು ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳಿಗೂ ಹಬ್ಬಿದ್ದು, ಅಪಾರ ಸಾವು ನೋವು ಸೇರಿದಂತೆ ದೇಶಗಳ ಆರ್ಥಿಕ ಸಂಕಷ್ಟಕ್ಕೀಡು ಮಾಡಿದೆ. ಈ ನಡುವೆ ನ್ಯೂಜಿಲೆಂಡ್ ರಾಷ್ಟ್ರ ಮಾತ್ರ ತಾನು ಕೋವಿಡ್-19 ಮುಕ್ತವಾಗಿರುವುದಾಗಿಯೂ, ಸೋಂಕು ನಿಯಂತ್ರಣಕ್ಕೆ ತಾನು ಜಾರಿಗೊಳಿಸಿದ್ದ ಎಲ್ಲ ನಿರ್ಬಂಧಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ. * ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡೆನ್, ದೇಶದಲ್ಲಿ ಕೋವಿಡ್ ನಿರ್ಬಂಧಗಳೆಲ್ಲವನ್ನೂ ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ. ಹಾಗೂ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಿ ಸಹಕರಿಸಿದ್ದಕ್ಕಾಗಿ ದೇಶದ ಪ್ರಜೆಗಳೆಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.