Job Description: ಇದೇ ಮೊದಲ ಬಾರಿಗೆ ದೇಶದ ಗಡಿಯಾಚೆಗೂ ಭಾರತೀಯ ರೈಲ್ವೆ ತನ್ನ ಪಾರ್ಸೆಲ್ ಸೇವೆಯನ್ನು ವಿಸ್ತರಿಸಿದೆ. ಮೊದಲ ಪಾರ್ಸೆಲ್ ರೈಲು ಬಾಂಗ್ಲಾದೇಶದ ಬೇನಾಪೋಲ್ ಗೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಡ್ಡಿಪಲೆಂನಿಂದ ಒಣಮೆಣಸಿನಕಾಯಿ ಹೊತ್ತೊಯ್ದಿತು. ಈ ವಿಶೇಷ ಪಾರ್ಸೆಲ್ ರೈಲಿಗೆ 16 ವ್ಯಾನ್ ಗಳಿದ್ದು, ಒಟ್ಟು 384 ಟನ್ ತೂಕದ ಒಣಮೆಣಸಿನಕಾಯಿ ಸಾಗಿಸಲಾಯಿತು. ಹಾಗೂ ಈ ಮೂಲಕ ಶೇಕಡಾ 30 ಪರ್ಸೆಂಟ್ ಗೂ ಹೆಚ್ಚು ಹಣ ಉಳಿತಾಯ ಮಾಡಲಾಯಿತು.