Job Description: ನವದೆಹಲಿ: ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಲ್ಲಿ (CAPF) ತೃತೀಯ ಲಿಂಗಿಗಳನ್ನು ನೇಮಿಸಿಕೊಳ್ಳುವ ಐತಿಹಾಸಿಕ ಕ್ರಮಕ್ಕೆ ಕೇಂದ್ರ ಗೃಹ ಸಚಿವಾಲಯ ಇತ್ತೀಚಿಗೆ ಚಾಲನೆ ನೀಡಿತು. ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಕೂಡ ಇದಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರದ ಈ ನಿರ್ಣಯದಿಂದಾಗಿ ತೃತೀಯ ಲಿಂಗಿಗಳೂ ಇನ್ನು ಮುಂದೆ ಕೇಂದ್ರೀಯ ಅರೆಸೇನಾ ಪಡೆಗಳಲ್ಲಿ ಮುಂಚೂಣಿ ನಾಯಕತ್ವ ವಹಿಸುವುದಕ್ಕೆ ಅವಕಾಶ ಲಭಿಸಲಿದೆ. ಮೊದಲ ಪ್ರಕರಣ : 2017ರಲ್ಲಿ ತಮಿಳುನಾಡಿನಲ್ಲಿ ಕೆ. ಪ್ರತೀಕಾ ಯಾಶಿನಿ ಎಂಬುವವರು ಪೊಲೀಸ್ ಇಲಾಖೆಗೆ ಸೇರಿದ್ದು ಇದು ದೇಶದ ಮೊದಲ ತೃತೀಯ ಲಿಂಗಿಯೋರ್ವರು ಪೊಲೀಸ್ ಪಡೆಗಳಿಗೆ ಸೇರ್ಪಡೆಗೊಂಡ ಪ್ರಕರಣವಾಗಿದೆ.