Job Description: ಮುಂಬಯಿ: ಪ್ರಸ್ತುತ ಏಷ್ಯಾದ ನಂ.1 ಶ್ರೀಮಂತ ಆಗಿರುವ ಮುಕೇಶ್ ಅಂಬಾನಿ ಮಾಲಿಕತ್ವದ ಜಿಯೋ ಸಂಸ್ಥೆಯು ಗೂಗಲ್ನ ಗೂಗಲ್ ಮೀಟ್, ಅಮೆರಿಕ ಮೂಲದ ಝೂಮ್, ಮೈಕ್ರೋಸಾಫ್ಟ್ ನ ಸ್ಕೈಪ್ಗೆ ಪೈಪೋಟಿ ನೀಡಲು ಜಿಯೋಮೀಟ್ ದೃಶ್ಯ ಸಂವಾದ ನೂತನ ಅಪ್ಲಿಕೇಶನ್ ನ್ನು ಬಿಡುಗಡೆಗೊಳಿಸಿದೆ. * ಈ ಆಯಪ್ ಮೂಲಕ ಏಕಕಾಲದಲ್ಲಿ 100 ಜನರೊಂದಿಗೆ ಉಚಿತವಾಗಿ ದೃಶ್ಯ ಸಭೆ ನಡೆಸಬಹುದು. ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ವರ್ಕ್ ಫ್ರಮ್ ಹೋಂ ಕೆಲಸ ಮಾಡುವವರ ಸಂಖ್ಯೆ ಹತ್ತಾರುಪಟ್ಟು ಹೆಚ್ಚಿರುವ ಈ ಸಮಯದಲ್ಲಿ ಈ ಆಯಪ್ ಮಾರುಕಟ್ಟೆಗೆ ಬಂದಿದೆ.