Job Description: ನವದೆಹಲಿ: ಭಾರತೀಯ ರೈಲ್ವೆಯು ಮತ್ತೊಂದು ಮಹತ್ತರ ಸಾಧನೆ ಮಾಡಿದ್ದು, ನಾಲ್ಕು ಖಾಲಿ BOXN ರೇಕ್ಗಳನ್ನು ಒಟ್ಟುಗೂಡಿಸಿ ಸುಮಾರು 2.8 ಕಿಲೋಮೀಟರ್ ಉದ್ದದ ರೈಲನ್ನು ನಡೆಸುವ ಈ ಮೂಲಕ ಈ ಸಾಧನೆ ಮಾಡಿದೆ. ಭಾರತೀಯ ರೈಲ್ವೆ ನಾಲ್ಕು ಸೆಟ್ಗಳ ವಿದ್ಯುತ್ ಲೋಕೋಮೋಟಿವ್ ಗಳ ಬಲದಿಂದ ಈ ರೈಲು ಸಂಚರಿಸಿದೆ. ಈ ಅತಿ ಉದ್ದದ ಈ ರೈಲಿಗೆ 'ಶೇಶ್ನಾಗ್' ಎಂದು ನಾಮಕರಣ ಮಾಡಲಾಗಿದೆ. ಪ್ರಸ್ತುತ ಭಾರತೀಯ ರೈಲ್ವೆಯ ಅತಿ ಉದ್ದದ ರೈಲು 'ಶೇಷನಾಗ' ಆಗಿದೆ. * ಆಗ್ನೇಯ ಮಧ್ಯ ರೈಲ್ವೆಯು ಈ ಅನನ್ಯ ಸಾಧನೆಯನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಶ್ಲಾಘಿಸಿದ್ದು, ದಾಖಲೆಯ 2.8 ಕಿ.ಮೀ ಉದ್ದದ ಸರಕು ಸಾಗಣೆ ರೈಲನ್ನು ಭಾರತೀಯ ರೈಲ್ವೆ ಯಶಸ್ವಿಯಾಗಿ ನಿರ್ವಹಿಸಿದೆ. 4 ಸಂಯೋಜಿತ ರೈಲ್ವೆ ಸೇರಿ 251 ವ್ಯಾಗನ್ಗಳು ಒಟ್ಟು 2.8 ಕಿ.ಮೀ ನಾಗ್ಪುರ ಮತ್ತು ಕೊರ್ಬಾ ನಡುವೆ ಸಂಚರಿಸುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.