Job Description: ಹೈದರಾಬಾದ್ : ಕೊರೊನಾವೈರಸ್ ವಿರುದ್ಧ ಲಸಿಕೆ/ಔಷಧ ಕಂಡು ಹಿಡಿಯಲು ಭಾರತವು ಸೇರಿ ವಿಶ್ವದ ಹಲವು ವಿಜ್ಞಾನಿಗಳು ಮತ್ತು ಸಂಶೋಧಕರು ಶ್ರಮಿಸುತ್ತಿರುವ ಹಿನ್ನಲೆಯಲ್ಲೇ, ಸ್ವದೇಶಿ ಲಸಿಕೆ "ಕೊವ್ಯಾಕ್ಸಿನ್" ಗೆ 'ಡ್ರಗ್ ಕಂಟ್ರೋಲರ್ ಜನರಲ್ ಅಫ್ ಇಂಡಿಯಾ'(ಡಿಸಿಜಿಐ)ದ ಅನುಮತಿ ಸಿಕ್ಕಿದ್ದು, ಕ್ಲಿನಿಕಲ್ ಟ್ರಯಲ್ ಪ್ರಕ್ರಿಯೆ ಜಾರಿಯಲ್ಲಿದೆ. ಈ ಲಸಿಕೆಯನ್ನು ಬರುವ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನದಂದು ಮಾರುಕಟ್ಟೆಗೆ ತರಲು ಯೋಜಿಸಲಾಗಿದೆ. * ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ಸಂಸ್ಥೆಯು ಈ ಕೊವ್ಯಾಕ್ಸಿನ್ ಲಸಿಕೆಯನ್ನು ಸಿದ್ದಪಡಿಸಿದ್ದು, ಕ್ಲಿನಿಕಲ್ ಟ್ರಯಲ್ ಗೆ ಬಳಸಬಹುದು ಎಂದು ಡ್ರಗ್ ಕಂಟ್ರೋಲರ್ ಜನರಲ್ ಅಫ್ ಇಂಡಿಯಾ(ಡಿಸಿಜಿಐ) ಈಗಾಗಲೇ ಅನುಮತಿ ನೀಡಿದೆ.