Job Description: ಮಾಸ್ಕೋ (ರಶಿಯಾ): ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2036ರವರೆಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡುವ ಸಂವಿಧಾನ ತಿದ್ದುಪಡಿ ಅನುಮೋದನೆಗೆ ರಷ್ಯಾ ದೇಶವ್ಯಾಪಿ ನಡೆದ ಮತದಾನದಲ್ಲಿ ಭಾರೀ ಸಂಖ್ಯೆಯಲ್ಲಿ ರಷ್ಯನ್ನರು ಬೆಂಬಲಿಸಿರುವದಾಗಿ ಆಂಶಿಕ ಫಲಿತಾಂಶಗಳು ತಿಳಿಸಿವೆ. * ಒಟ್ಟು ಏಳು ದಿನ ನಡೆದ ಮತದಾನ ಪ್ರಕ್ರಿಯೆ ಕೊನೆಯಲ್ಲಿ 60 ಶೇಕಡ ಮತ ಎಣಿಕೆ ಪೂರ್ಣಗೊಂಡಿದ್ದು, ಇವುಗಳ ಪೈಕಿ 76.9 ಶೇಕಡ ಮತದಾರರು ಪುಟಿನ್ ಸುಧಾರಣೆಗಳಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಕೇಂದ್ರೀಯ ಚುನಾವಣಾ ಆಯೋಗ ತಿಳಿಸಿದೆ.