Job Description: ಮುಂಬೈ : ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಅಡಿಯಲ್ಲಿ ಬರುವ ಜಿಯೋ ಸಂಸ್ಥೆಯಲ್ಲಿ ಈಗಾಗಲೇ ಹಲವು ಸಂಸ್ಥೆಗಳು ಹೂಡಿಕೆ ಮಾಡಿದ್ದು, ಈ ಸಾಲಿಗೆ ಈಗ ಅಮೆರಿಕ ಮೂಲದ ಟೆಕ್ನಾಲಜಿ ಕಂಪನಿ ಇಂಟೆಲ್ ಕೂಡ ಸೇರಿಕೊಂಡಿದೆ. ಈ ಮೂಲಕ ಜಿಯೋದಲ್ಲಿ ಕೇವಲ 11 ವಾರಗಳಲ್ಲಿ 12ನೇ ಹೂಡಿಕೆ ಇದಾಗಿದೆ. ಇಂಟೆಲ್ ಜಿಯೋದ 0.39 ಪಾಲನ್ನು 1894 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಹಿನ್ನಲೆ ರಿಲಾಯನ್ಸ್ ಷೇರಿನ ಮೌಲ್ಯ ಹೆಚ್ಚಿದೆ. * ಇಂಟೆಲ್ನ ಹೂಡಿಕೆಯನ್ನು ಒಳಗೊಂಡಂತೆ ಜಿಯೋ ಈವರೆಗೆ 1,17,588.45 ಕೋಟಿ ರೂಪಾಯಿ ಕಲೆ ಹಾಕಿದಂತಾಗಿದೆ. * ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ಬುಕ್, ಜಿಯೋದ ಶೇ. 9.9 ಷೇರನ್ನು ಖರೀದಿ ಮಾಡಿದ ನಂತರ ಹಲವು ಸಂಸ್ಥೆಗಳು ಜಿಯೋ ದಲ್ಲಿ ಹೂಡಿಕೆ ಮಾಡಿದವು.