Job Description: ನವದೆಹಲಿ : ಭಾರತದ ಯುವ ಅಂಪೈರ್ ನಿತಿನ್ ಮೆನನ್ ಅವರು 2020-21ರ ಸೀಸನ್ಗಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಎಲೈಟ್ ಪ್ಯಾನೆಲ್ನಲ್ಲಿ ಆಯ್ಕೆಯಾಗಿದ್ದಾರೆ. ಈ ಮೂಲಕ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಎಲೈಟ್ ಪ್ಯಾನೆಲ್ನಲ್ಲಿ ಆಯ್ಕೆಯಾದ 3 ನೇ ಅಂಪೈರ್ ಆಗಿರುತ್ತಾರೆ. * ಇವರು ಇಂಗ್ಲೆಂಡ್ನ ಅಂಪೈರ್ ನಿಗೆಲ್ ಲಾಂಗ್ ಅವರ ಬದಲಿಗೆ ಆಯ್ಕೆಗೊಂಡಿದ್ದಾರೆ. * 36 ರ ಹರೆಯದ ನಿತಿನ್ ಮೆನನ್ ಈವರೆಗೆ 3 ಟೆಸ್ಟ್ ಪಂದ್ಯಗಳು, 24 ಏಕದಿನ ಪಂದ್ಯಗಳು ಮತ್ತು 16 T20 ಪಂದ್ಯಗಳಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. * ನಿತಿನ್ ಮೆನನ್ ಅವರಿಗೂ ಮೊದಲು ಐಸಿಸಿ ಎಲೈಟ್ ಪ್ಯಾನೆಲ್ಗೆ ಭಾರತದಿಂದ ಮಾಜಿ ನಾಯಕ ಶ್ರೀನಿವಾಸ್ ವೆಂಕಟ್ರಾಘವನ್ ಮತ್ತು ಸುಂದರಂ ರವಿ ಆಯ್ಕೆಯಾಗಿದ್ದರು.