Job Description: ನವದೆಹಲಿ: ಕೋವಿಡ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ಭಾರತದ ಸುಮಾರು 15 ಕೋಟಿ ಸಣ್ಣ ಉದ್ದಿಮೆಗಳಿಗೆ ₹ 5,625 ಕೋಟಿ ರೂಪಾಯಿಯಷ್ಟು ನೆರವು ನೀಡುವುದಾಗಿ ವಿಶ್ವ ಬ್ಯಾಂಕ್ ಘೋಷಿಸಿದೆ. ವಿಶ್ವ ಬ್ಯಾಂಕ್ ಈಗಾಗಲೇ ಸಾಮಾಜಿಕ ಮತ್ತು ಆರೋಗ್ಯ ವಲಯಕ್ಕೆ ₹ 15 ಸಾವಿರ ಕೋಟಿ ಮೊತ್ತದ ಆರ್ಥಿಕ ನೆರವು ಘೋಷಿಸಿದೆ, ಈ ಮೂಲಕ ವಿಶ್ವಬ್ಯಾಂಕಿನ ಒಟ್ಟಾರೆ ನೆರವಿನ ಮೊತ್ತವು ₹20,625 ಕೋಟಿಗೆ ತಲುಪಿದೆ. * ಬ್ಯಾಂಕ್ ಅಥವಾ ಎಸ್ಐಡಿಬಿಐ ಮೂಲಕ ಮಾರುಕಟ್ಟೆಗೆ ನಗದು ಪೂರೈಕೆ ಮಾಡಲು ಆರ್ಬಿಐ ಸೂಕ್ತ ಕ್ರಮ ಕೈಗೊಂಡಿರುವದಾಗಿ ವಿಶ್ವ ಬ್ಯಾಂಕ್ನ ಭಾರತದ ನಿರ್ದೇಶಕ ಜುನೈದ್ ಅಹ್ಮದ್ ಮಾಹಿತಿ ನೀಡಿದ್ದಾರೆ.