Job Description: ಗುವಾಹಟಿ: ಸುಮಾರು 129 ವರ್ಷಗಳಿಂದ ಕಣ್ಮರೆಯಾಗಿದ್ದ ಅಪರೂಪದ ಜಾತಿಯ ಹೆಬಿಯಸ್ ಪಿಯಾಲಿ ಎಂಬ ವೈಜ್ಞಾನಿಕ ಹೆಸರಿನ ಹಾಗೂ ಅಸ್ಸಾಂ ಕೀಲ್ ಬ್ಯಾಕ್ ಎಂದು ಕರೆಯಲ್ಪಡುವ ಹಾವನ್ನು ಭಾರತೀಯ ವನ್ಯಜೀವಿ ಸಂಸ್ಥೆಯ ತಂಡವೊಂದು ಪತ್ತೆಹಚ್ಚಿದೆ. ಈ ಹಾವು 1891 ರಲ್ಲಿ ಅಸ್ಸಾಂನ ಸಿಬ್ಸಗರ್ ಜಿಲ್ಲೆಯಲ್ಲಿ ಬ್ರಿಟಿಷ್ ಟೀ ಪ್ಲಾಂಟರ್ ಸ್ಯಾಮ್ಯುಯಲ್ ಎಡ್ವರ್ಡ್ ಪೀಲ್ ಎಂಬಾತನಿಗೆ ಕಡೆಯದಾಗಿ ಕಾಣಿಸಿಕೊಂಡಿತ್ತು. * 50 ರಿಂದ 60 ಸೆ.ಮೀ ಉದ್ದ ಬೆಳೆಯುವ ಅಸ್ಸಾಂ ಕೀಲ್ಬ್ಯಾಕ್, ಒಂದು ವಿಷವಿಲ್ಲದ ಹಾವು. * ಅಸ್ಸಾಂ-ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡಿರುವ 118 ಕಿ.ಮೀ ವ್ಯಾಪ್ತಿ ಹೊಂದಿರುವ ಪೋಬಾ ಸಂರಕ್ಷಿತ ಅರಣ್ಯದಲ್ಲಿ ಈ ಹಾವು ದೊರೆತಿದೆ.