Job Description: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಜೋಳ ಸಂಶೋಧನಾ ವಿಭಾಗಕ್ಕೆ ದೇಶದ 'ಅತ್ಯುತ್ತಮ ಸಂಶೋಧನಾ ಕೇಂದ್ರ' ಪ್ರಶಸ್ತಿಗೆ ಪಡೆದಿದೆ. ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಜೋಳ ಸಂಶೋಧನಾ ವಿಭಾಗವು 'ದೇಶದ ಒಟ್ಟಾರೆ ಜೋಳದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜೋಳ ಸಂಶೋಧನಾ ವಿಭಾಗವು 1929 ರಿಂದ ಕಾರ್ಯಾರಂಭ ಮಾಡಿದ್ದು ಸುವರ್ಣ ಸಂಭ್ರಮ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಬಂದಿದ್ದು ವಿಶೇಷವಾಗಿದೆ ಎಂದು ಕುಲಪತಿ ಡಾ. ಮಹಾದೇವ ಚೆಟ್ಟಿ ಮಾಹಿತಿ ನೀಡಿದ್ದಾರೆ.