Job Description: ಭಾರತದಲ್ಲಿ ಕೋರೋಣ ಸೋಂಕಿನಿಂದಾಗಿ ವಿಧಿಸಿರುವ lockdown ಸಮಯದಲ್ಲಿ ಪ್ರಧಾನಿಯಿಂದ ಘೋಷಣೆಯಾದ ಆತ್ಮ ನಿರ್ಭರ್ ಭಾರತ್ ಅಭಿಯಾನದ ಅಂಗವಾಗಿ, ಪ್ರೈಮ್ ಮಿನಿಸ್ಟರ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ (PM FME) ಯೋಜನೆಯನ್ನು 2020 ಜೂನ್ 29 ರಂದು ಆರಂಭಿಸಲಾಯಿತು. ಈ ಯೋಜನೆಯನ್ನು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಅವರು ಚಾಲನೆ ನೀಡಿದರು. ಈ ಯೋಜನೆಗೆ ದಿನಾಂಕ 2020 ರ ಮೇ 20 ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. * ಈ ಯೋಜನೆಯಿಂದ 9 ಲಕ್ಷ ನುರಿತ ಮತ್ತು ಅರೆ-ನುರಿತ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಈ ಯೋಜನೆಗೆ ಒಟ್ಟು 35000 ಕೋಟಿ ರೂ ಹೂಡಿಕೆ ಮಾಡಲಾಗಿದೆ.