Job Description: ನವದೆಹಲಿ: ಜಾಗತಿಕವಾಗಿ ವ್ಯಾಪಿಸುತ್ತಿರುವ ಕೋರೋಣ ಸಾಂಕ್ರಾಮಿಕವನ್ನು ಕೇರಳ ರಾಜ್ಯದಲ್ಲಿ ಯಶಸ್ವಿಯಾಗಿ ನಿಯಂತ್ರಣ ಮಾಡಿದ ಕೇರಳ ಆರೋಗ್ಯ ಸಚಿವೆಯಾದ ಕೆ.ಕೆ.ಶೈಲಜಾ ಅವರಿಗೆ ವಿಶ್ವ ಸಂಸ್ಥೆ ಗೌರವ ಸಲ್ಲಿಸಿದೆ. ವಿಶ್ವಸಂಸ್ಥೆಯು ಇದೆ ದಿನಾಂಕ ಜೂನ್ 23 ರಂದು ಸಾರ್ವಜನಿಕ ಸೇವಾ ದಿನವನ್ನು ಆಚರಿಸಿದ್ದು, ಈ ಆಚರಣೆಯಲ್ಲಿ ಭಾಗವಹಿಸಿ ಅದರಲ್ಲಿ ಮಾತನಾಡಲು ಭಾರತದಿಂದ ಕೆ.ಕೆ.ಶೈಲಜಾ ಅವರಿಗೆ ಆಹ್ವಾನ ನೀಡಲಾಗಿತ್ತು. * ಭಾರತದಲ್ಲಿ ಮೊದಲ ಕೊವಿಡ್ ಪ್ರಕರಣ ಪತ್ತೆಯಾಗಿದ್ದು ಕೇರಳ ರಾಜ್ಯದಲ್ಲಿಯೇ ಆದರೂ ಅರೋಗ್ಯ ಸಚಿವೆಯಾದ ಕೆ.ಕೆ.ಶೈಲಜಾ ಅವರ ಮಾರ್ಗದರ್ಶನದಲ್ಲಿ, ಅದರ ನಿಯಂತ್ರಣದಲ್ಲಿ ಕೇರಳ ರಾಜ್ಯವು ಭಾರತದಲ್ಲಿಯೇ ಮಾದರಿಯಾಗಿದೆ. * ಇದನ್ನು ಗುರುತಿಸಿದ ವಿಶ್ವ ಸಂಸ್ಥೆ ಶೈಲಜಾ ಅವರನ್ನು ಸಾರ್ವಜನಿಕ ಸೇವಾ ದಿನಕ್ಕೆ ಸ್ಪೀಕರ್ ಆಗಿ ಆಹ್ವಾನಿಸಿ ಅವರಿಗೆ ಗೌರವ ನೀಡಿದೆ.